Saturday, 19 May 2012

ರಾಜಕಾರಣ (ರಾಜಕಾರಣಿ )

ದೇಶದಲ್ಲಿ ಒಂದು ರಾಜ್ಯ . ಅದರಲ್ಲಿ ತುಂಬಾ ರಾಜಕಾರಣಿಗಳೆಂಬ ತ್ಯಾಜ್ಯ .
ರಾಜಕಾರಣಿಗಳು ಮಾಡುವರು ರಾಜ್ಯವನ್ನು ಅವಿಬಾಜ್ಯ .
ದೇಶಕೊಂದ್ದು ಕೇಂದ್ರ .
ಮಾಡುವರು ದೇಶದ ಜನರ ಒಗ್ಗಟ್ಟನ್ನು ಆ ಪಕ್ಷ ಇ ಪಕ್ಷ ಎಂಬ ರಂದ್ರ
ಹೀಗಾಗಿ ಜನ ಆಗುವರು ಮಂದ .
ಕೊನೆಗೆ ರಾಜಕಾರಣಿಗಳು ಮಾಡುವರು ದೇಶವನ್ನು ಚಿದ್ರ .
ಹೀಗಾದಲ್ಲಿ ನಮಗೇಕೆ ಕೇಂದ್ರ ,ರಾಜ್ಯ ?.

Saturday, 14 April 2012

ಧರ್ಮಸ್ಥಳ ಮಹಾನಡಾವಳಿ ಬಗ್ಗೆ ಸ್ವಲ್ಪ ಮಾಹಿತಿ

ಧರ್ಮಸ್ಥಳ ಮಹಾನಡಾವಳಿ ಬಗ್ಗೆ ಸ್ವಲ್ಪ ಮಾಹಿತಿ
ಶ್ರೀಕ್ಷೇತ್ರ ಧರ್ಮಸ್ಥಳ ,ದಕ್ಷಿಣ ಕಾಶಿ ಎಂದೇ ಪ್ರಸಿದ್ದಿ ಹೊಂದಿದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ
ಇದೆ ,ಇಲ್ಲಿ ಪ್ರತಿ (೫೦ ವರ್ಷ ) ಐದು ದಶಕಗಳ ನಂತರ ಮಹಾನಡಾವಳಿ ನಡೆಯುತ್ತದೆ ,2005 ನೇ ಇಸವಿಯಲ್ಲಿ ಫೆ.18ರಿಂದ 28ರವರೆಗೆ ಮಹಾನಡಾವಳಿ ನಡೆದ್ದಿತ್ತು ,ಆಗ ಪೇಜಾವರ ಶ್ರೀ ಯವರು ಆ ಮಹಾನಡಾವಳಿ ಚಾಲನೆ ಮಾಡಿದರು.
ಅದರೆ ಪೇಜಾವರ ಶ್ರೀ ಯವರು ಇದು ಅವರು ನೋಡಿದ 2 ನೇ ಮಹಾನಡಾವಳಿ ಎಂದು ಅವರ ಭಾಷಣದಲ್ಲಿ ಹೇಳಿದರು ,ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಾಡಿನ ಮೂಲೆಮೂಲೆಗಳಿಂದ ಜನರು ಬಂದಿದ್ದರು ,
ನಾ ಕಂಡ ಆ ಮಹಾನಡಾವಳಿಯಲ್ಲಿ ನೇತ್ರಾವತಿಯಿಂದ ಹಿಡಿದು ,ಧರ್ಮಸ್ಥಳದ ವರೆಗೂ ಅನ್ನದಾನ,ಔಷಧ ,ಕಾಫಿ ,ಜೂಸ್,ನೀಡುತ್ತಿದ್ದರು .1951ರಲ್ಲಿ ಮಹಾನಡಾವಳಿ ನಡೆದಿತ್ತು ,ನಂತರ ಐದು ದಶಕಗಳ ನಂತರ

ಮಹಾನಡಾವಳಿ
2005 ನೇ ಇಸವಿಯಲ್ಲಿ ನಡೆಯತಿರುವುದು



ಸಶೇಷ

Friday, 6 April 2012

ಪ್ರಯಾಣ ಸ್ವಲ್ಪ್ಪ ನಗೋದಿಕ್ಕೆ

ಓರ್ವ ಮುದುಕ ಬಸ್ಸಿಗೆ ಹತ್ತಿದಾಗಿಂದ Conductor ಕಡೆಗೆ ನೋಡುತಲೇ ಇದ್ದಾನೆ
ಎಲ್ಲಿಯೂ ಹಿಡಿದು ಕೊಳ್ಳದ್ದರಿಂದ ಮುಗ್ಗರಿಸುತ್ತಿದ್ದುದು ಕಂಡಾಗ Conductor ಸಹಾನುಭೂತಿಯಿಂದ ಹೇಳಿದ "ಕಂಬಿಯನ್ನು ಹಿಡಿದುಕೊಳ್ಳಿ ಅಜ್ಜಾ ಇಲ್ಲದಿದ್ರೆ
ಬ್ಯಾಲೆನ್ಸ್ ಸಿಗುವುದಿಲ್ಲ ".
ನಡುಗುವ ಕೈಗಳನ್ನು ಮುಂದೆ ಚಾಚಿ ಸೀಟಿನ ಹಿಂಬದಿಯನ್ನು ಹಿಡಿಯುತ್ತಾ
ಅಜ್ಜಾ ಹೇಳಿದ "ಕಂಬಿಯನ್ನು ಹಿಡಿದೆ ಇನ್ನಾದರು ನನ್ನ ಬ್ಯಾಲೆನ್ಸ್ ಮೂರೂ
ರೂಪಾಯಿ 50 ಪೈಸೆ ಕೊಡು"
ಬ್ಯಾಲೆನ್ಸ್,ಬ್ಯಾಲೆನ್ಸ್

Friday, 23 March 2012

ಅಜ್ಜಿಯ ಹೊಟ್ಟೆಪಾಡು

ಬೆಂಗಳೂರಿನ ಒಂದು ಬಡಾವಣೆ ,
ಒಂದು ಅಜ್ಜಿ ,ದೇವಸ್ಥಾನದ ಮುಂದೆ ಪ್ರತಿ ಮುಂಜಾನೆ ಇರುತ್ತಿದಳು
,ಯಾಕೆಂದರೆ ಆ ಅಜ್ಜಿ ತನ್ನ ಹೊಟ್ಟೆಪಾಡಿಗಾಗಿ ಹೂವು ಕಟ್ಟಿ ತನ್ನ ಜೀವನ ನಡೆಸುತ್ತಿದಳು ,ಆದ್ರೆ ಆ ಅಜ್ಜಿ ಮುಂದೆ ಇದ್ದ ದೇವಸ್ಥಾನಕ್ಕೆ ಮಾತ್ರ ಪ್ರತಿ ದಿನ ನೂರಾರು ಜನ ಬರುತ್ತಿದರು ,ಆದ್ರೆ ಆ ಬಡ ಅಜ್ಜಿ ಮಾತ್ರ ಯಾರಾದರು ಹೂವು ತೆಗೆದುಕೊಳ್ಳಲು ಬರುವರೆ ಎಂದು ಕಾಯುತ್ತಿದ್ದಳು ,ಆದ್ರೆ ಅಲ್ಲಿ ಬರುವ ಜನ ಮಾತ್ರ ಒಂದು ಸ್ವಲ್ಪ ಹೂವು ತೆಗೆದುಕೊಳ್ಳಲು ತುಂಬಾ ಚರ್ಚೆ ಮಾಡುತಿದ್ರು ,
ಆ ಅಜ್ಜಿ ಹೇಗೋ ಪಾಲಿಗೆ ಬಂದದ್ದು ಇಷ್ಟೆ ಅಂದು ಎಲ್ಲ ಜನರಿಗೆ ಹೇಳಿ ಹೂವು ಕೊಡುತ್ತಿದಳು .
ಆದ್ರೆ ಇನ್ನೇನು ಹೂವು ಬಾಡುವ ಸಮಯ ,ಬಾಡಿದರೆ ಅದನ್ನು ಯಾರು ತೆಗೆದು ಕೊಳ್ಳುತ್ತಿರಲ್ಲಿಲ್ಲ ,
ಹಾಗಾಗಿ ಆ ಅಜ್ಜಿ ಆ ಹೂವು ದೇವಸ್ಥಾನದ ಅರ್ಚಕರಿಗೆ ಕೊಟ್ಟು ಪುನ ಮನೆಗೆ ಹಿಂತಿರುಗುತ್ತಿದಳು .

Sunday, 19 February 2012

ಶಿವ ರಾತ್ರಿ ಹಬ್ಭದ ಹಾರ್ದಿಕ ಶುಭಾಶಯಗಳು.

Saturday, 4 February 2012

ತೂಕ


ರಾಮ್:ನನ್ನ ಪತ್ನಿ ತೂಕ ಕಡಿಮೆ ಮಾಡುವ ಪ್ರಯತ್ನದಲ್ಲಿ ಇದ್ದಾಳೆ .

ಶಾಮ್:ಏನು ವ್ಯಾಯಾಮ ಪ್ರಾರಂಭ ಮಾಡಿದ್ಲಾ??
ರಾಮ್ :ಇಲ್ಲ ಕುದುರೆ ಸವಾರಿ ಮಾಡುತ್ತಿದ್ದಾಳೆ .
ಶಾಮ್:ಏನಾದ್ರು ಪರಿಣಾಮ ಆಗಿದೆಯೇ ?
ರಾಮ್:ಹೌದು ಕುದುರೆ 5 ಕಿಲೋ ಕಡಿಮೆಅಗಿದೆ .